ಹಸೆ ಬರೆಯುವುದು ಗೌಡರ ಸಂಸ್ಕೃತಿಯ ಸಿರಿವಂತಿಕೆಯ ಅನಾವರಣ:-
ಮದುವೆಯ ಮದುರಂಗಿ ಶಾಸ್ತ್ರದಂದು ಊರುಗೌಡ ಕಲಾನಿಪುಣ ಯುವಕರಿಗೆ ನೀರುಕೊಟ್ಟು ಹಸೆ
ಬರೆಯಲು ಕೇಳಿಕೊಳ್ಳುತ್ತಾರ ೆ.ನೆಲಕ್ಕಿ
ಅಡಿಯಲ್ಲಿ ಬಲಬಾಗದಲ್ಲಿ ಗಂಡಿಗೂ, ಎಡಭಾಗದಲ್ಲಿ ಹೆಣ್ಣಿಗೂ ಹಸೆ ಬರೆಯುತ್ತಾರೆ. ಸೂರ್ಯ
ಹುಡುಗನನ್ನೂ, ಚಂದ್ರ ಹುಡುಗಿಯನ್ನೂ ಸಂಕೇತಿಸುತ್ತವೆ. ಹೆಸರನ್ನೂ ಬರೆಯುತ್ತಾರೆ.ಹಸೆ
ಬರೆದವರಿಗೆ ಹೊದಳು, ಅವಲಕ್ಕಿ, ಬಾಳೆ ಹಣ್ಣು ಕಾಣಿಕೆ ನೀಡುತ್ತಾರೆ. ಬಣ್ಣ ಬಣ್ಣದ
ಚೋಕುಗಳಿಂದ ಮಾಡಿದ ಚಿತ್ತಾರದಲ್ಲಿ ಹೈದರ ಜಾಣತನ ಕಾಣುತ್ತದೆ, ಕಂಪ್ಯೂಟರು ಕುಟ್ಟುವ
ಈಗಿನ ನನ್ನಂತ ಜವಾಣರಿಗೆ ಈಗ ಮರ್ಯಾದೆಯ ಪ್ರಶ್ನೆ, ಹಾಗಾಗಿ ಯಾರೂ ಮುಂದೆ ಬರುವುದಿಲ್ಲ.
ಇದು ಇವತ್ತೊಂದು ಕಡೆ ನಾನು ಬರೆದದ್ದು.
ಅಕ್ಷರ ನಂಟು
Monday, 6 October 2014
Sunday, 5 October 2014
ಶ್ರೀ ಕೃಷ್ಣ ವಿಜಯ ಯಕ್ಷಗಾನ ಪ್ರಸಂಗ ತುಳುನಾಡ ದೈವಗಳ ಹೆಸರುಗಳು -ಚರಣ್ ಗೌಡ ಐವರನಾಡು
ತುಳುನಾಡ ದೈವಗಳ ಹೆಸರುಗಳಿರುವ ಭಾಮಿನಿ ಷಟ್ಪದಿಯಲ್ಲಿರುವ ಕಲ್ಯಾಣಗುಂಡರಾಯರ ಮಗ
ಕಲ್ಯಾಣಿ ಸುಬ್ರಾಯ ವಿರಚಿತ "ಶ್ರೀಕೃಷ್ಣ ವಿಜಯ" ಪ್ರಸಂಗದ ಭಾಗ ರಾಯ ನಾಲ್ಕೈತಾಯ
ಕೊಡಮಂ|ಜಿತಾಯ ಜಾರಂದಾಯ ಮೂಜಿ| ಲ್ಲಾಯ ಕನಪಡಿತಾಯ ಪಂಜಿತಾಯ ಮಲರಾಯ|| ಮಾಯಕದ ಕುಂದಾಯ
ಬಚ್ಚಂ|ತಾಯ ಮಹಿಷಾಂತಾಯ ನಾರ್ಣಂ| ತಾಯ ಮಗರಂದಾಯ ಬುಡ್ಡಂತಾಯ ಮಾಡ್ಲಾಯ|1|ಭೀಯ
ಕುರಿಯಡಿತಾಯ ಕೆಂಜ|ಲ್ತಾಯ ಒರ್ಮಲ್ತಾಯ ಕಾಣಂ|ತಾಯ ಗಿಳಿಗಂಣಾಯ ಹರಿಕಾರಾಯ ಬಬ್ಬರ್ಯ|
ಬಾಯದುಗ್ಗೆಂತಾಯ ಪಂದೊಟಿ|ನಾಯ ಹಾದಿಕರಾಯ ದುರ್ಗ|ಲ್ಲಾಯ ಮುಡಿಪಿನ್ನಾಯಯೈವರ
ೆ
ಭೂತನಜ್ಜಾಯ|2| ರಂಜಕಾಸುರ ಗುಳಿಕ ನಾಟಿಕ| ಳಂಜ ಕಲ್ಕುಡ ಬಂಟ ಭೈರವ| ಪಂಜಿ ಬೊಮ್ಮ
ಜುಮಾದಿ ಕುಟೀಚಾತು ಜಟಧಾರಿ|| ಪಂಜುರುಳಿ ಪೊಸಭೂತ ಕೋಟೀ| ಪೂಂಜೆಯಾಲೀಭೂತ ಬೈದ್ಯಾ|
ಮಂಜೊಟ್ಟಿನ್ನಾಯೆಷ ್ಟ ದೇವತೆ ಕೊಡದಬ್ಬುಕುಲೆ|3| ಕುರುಪೆರುಗಡಬ್ಯಗ್ ಯೆದಾರಗೆ|
ಕೊರಗ ಪರಪುಣ್ಣಾಯ ಲೆಕ್ಕೇ|ಶ್ವರಿ ಮರುಳ್ಜುಮಾದಿ ಯಬ ಭಳತಾಯನಣ್ಣಪ್ಪ|| ಕೊರತಿ ಧೂಮಾವತಿ
ಜಕಿಣಿ ಮಲೆ| ಕೊರತಿ ಪಿಲಚಾಮುಂಡಿ ಬನಶಂ|ಕರಿಯ ರದ್ಧರೆ ಪಂಜುರುಳಿ ವರ್ಣಾಯ
ಪಂಜುರುಳಿ|4| ಅಂಗರಣ್ಣಾಯ ಜಲಧೀದೇ|ಸಿಂಗ ಕುಂಞಭೂತ ನಿರ್ಕಾ|ರ್ಳಿಗ ನಡ್ದೊರ್ದೇಬೆ
ಕಾಮಾರ್ಚಂಡಿ ನೀರ್ಕನ್ಯೆ|| ಭಂಗಕೊಡುವ ಶಿರಾಡಿ ಭೂತ ಕೊ|ಡಂಗೆ ತಾಯಾ ವಿಷ್ಣು
ಮೂರ್ತೀ|ತುಂಗ ಕೊಡಮಣ ಪಂಜುರುಳಿ ಮೊರಚಂಡಿ ಸಹದೇವ|5|ಆರುತಲೆಯ ವ ಶಿರವನರಿದಶ|ರೀರವು ಳ್ಳವ ಗುತ್ತಿಗಮ್ಮ ಕ|ಠೋರವಾಗಿಹ ಭದ್ರ ಕಾಳಿಕುಮಾರಿ ಮಾಂಕಾಳಿ||ವೀರಭದ್ ರ ವಿಶಾಚಿ ಕನ್ಯೆ|ಕುಮಾರಿ ಸುಬ್ರಹ್ಮಣ್ಯ ಶಾಕಿನಿ|ಮಾರಿದೇವತ ೆ ಬೊಮ್ಮರಕ್ಕಸ ಗಂಧರ್ವ|6| ಕೋಟಿ ಪಿಲಿ ಚಾಮುಂಡಿ ಝಟ್ ಬಲ್|ದಾಟೆನಿಪಸಿರಿ ಬೊಮ್ಮ ಜತಿರುಹು| [May be ಜತಿರುಹು it is vanished due to damage] ಕಾಟಕೊಡುವ ಕಲ್ಲುರುಟಿಯುಳ್ಳಾ ಲ್ತಿ ಮಯ್ಯಂತಿ||ಕೋಟಲೆಯ
ಪಿಲಿಭೂತ ಬಲು ಬೊ|ಬ್ಬಾಟದಾ ಚೌಡಪ್ಪನೆಂದೀ| ಪಾಟಿ ದೈವಂಗಳೆಂದು ಕೊಂಡಾಡುವರು
ಪಾದಜರು|7| Phto fr laxmi g prasad ಇಲ್ಲಿ ಕವಿಗೆ ಇರುವ ತಾತ್ಸರದ ಭಕ್ತಿ ಕಾಣುವುದು
ಬೇಸರದ ಸಂಗತಿ
ಫ್ಯಾಕ್ಟೋರಿಯಲ್ ಗಣಿತಕ್ಕೂ ಚೆನ್ನಕೇಶವನಿಗೆ ಎಂತ ನಂಟು? -ಚರಣ್ ಗೌಡ ಐವರನಾಡು

ಫ್ಯಾಕ್ಟೋರಿಯಲ್ ಗಣಿತಕ್ಕೂ ಚೆನ್ನಕೇಶವನಿಗೆ ಎಂತ ನಂಟು? ನಂಟು ಇದೆ......! ಬೇಲೂರಿನಲ್ಲಿ ಇಪ್ಪತ್ತ ನಾಲ್ಕು ಬಗೆಯ ಚೆನ್ನಕೇಶವ ವಿಗ್ರಹಗಳಿವೆಯಂತೆ
Friday, 25 April 2014
.ನಾನು ಬೆಂಕಿಯಲ್ಲಿ ಬೆಂದವಳು-ಚರಣ್ ಗೌಡ ಐವರನಾಡ್******
Masti
found in Bellareನಾನೊಂದು ಬರಿಯ ಪ್ರತಿಮೆಯಲ್ಲಾ...... ನಾನು ಎಲ್ಲೆಂದರಲ್ಲಿ ತಿರಸ್ಕಾರದಿಂದ
ಎಸೆಯುವ ಆಟದ ಬೊಂಬೆಯಲ್ಲಾ.... ನನ್ನೊಳಗೆ ಧಗಧಗಿಸಿ ಉರಿಯುತ್ತಿರುವ ನೋವಿದೆ!!!
ಶತವರುಷಗಳ ಭಯಾನಕ ಕಣ್ಣೀರಿದೆ....! ಕೈಹಿಡಿದಾತ ಸತ್ತನೆಂದು ನನ್ನನ್ನು ಆತನ
ಶವದೊಂದಿಗೆ ಸಂಕಲೊಯಿಂದ ಕೈ ಕಾಲುಗಳನ್ನು ಕಟ್ಟಿ ಕಾಟಕ್ಕೆ ನೂಕಿದರು ಮಂದಿ.....! ಕೆಂಪು
ಕೆನ್ನಾಲಿಗೆ ಹೊರಚಾಚುವ ಬೆಂಕಿಯ ಉರಿಗೆ ಹೂವಿನಂತೆ ಬೆಂದು ಭಸ್ಮವಾದೆ......!
ಉರಿ ತಾಳಲಾರದೆ ಕಾಟದಿಂದ ಎದ್ದು ಓಡಲು ಯತ್ನಿಸಿದೆ....! ಹೂವಂತ ಮೈ ಕರಗಿ
ಕಪ್ಪಗಾಯಿತು...! ಹುಟ್ಟುನೀಡಿದಾಕೆಯನ್ನು ಕೂಗಿದೆ....! ಪಾಪಿಗಳು,
ಬಡಿಗೆಯಿಂದ ಒತ್ತಿಹಿಡಿದರು.....ಅಮ್ಮಾ....! ನನ್ನೊಳಗೂ ಪ್ರಾಣವಿದೆ ಎಂಬುದನ್ನು
ಮರೆತೇ ಬಿಟ್ಟರು,ನೀಚರು.....! ಇಂದು ನಾನೇ 'ಮಾಸ್ತಿ-ಮಹಾಸತಿ".
ನನಗಾಗಿ ಕಲ್ಬರಹ,ಪ್ರತಿಮೆಗಳು....ಸ್ವರ್ಗಾರೋಹಣದ ಕಲಶಗಳು! ಅಷ್ಟಾದರೂ
ಮಾಡಿದರಲ್ಲಾ... ಎಂದು ನಿಟ್ಟುಸಿರು ಬಿಟ್ಟೆ...! ಪಾಪಿಗಳು, ಅವುಗಳನ್ನೂ
ನಾಶಮಾಡಿದರು......! ಅವರಿಗೇನು ಗೊತ್ತು?ನಾನು ಬೆಂಕಿಯಲ್ಲಿ ಬೆಂದವಳು....! ಬೆಂದು
ಕರಕಳಾದವಳು...! photo by Dr.Laxmi varanasi
ನಮ್ಮ ಐತಿಹಾಸಿಕತೆಯ ತಾತ್ಸಾರ-charan gouda aivaranadu
.....::::: ನಾವು ಇತಿಹಾಸ ಮರೆತು ಭವಿಷ್ಯದ ಸೌಧ
ಕಟ್ಟಹೊರಟಿದ್ದೇವೆ. ಫೌಂಡೇಷನ್ನು ಇಲ್ಲದೆ ಕಟ್ಟೋಣ ಕಟ್ಟಿದಂತೆ!!! ಆ ಕಾರಣಕ್ಕಾಗಿ
ಬೇಲೂರು ಹಳೆಬೀಡು ಬರಿಯ ಕಲ್ಲರಾಶಿ! ನಮಗಿರುವ ಐತಿಹಾಸಿಕ ಕುರುಹುಗಳ ಬಗೆಗಿನ ತಾತ್ಸಾರ,
ಮೌಢ್ಯತೆ ಕಂಡಾಗ ಬೇಸರವಾಗುತ್ತದೆ. ಇತ್ತೀಚೆಗೆ ಹಿರಿಯ ಸಂಶೋಧಕಿ ಲಕ್ಷ್ಮಿ
ವಾರಣಾಸಿಯವರೊಂದಿಗಿನ ಸಂಭಾಷಣೆಯಲ್ಲಿ ಈ ಬಗೆಗೆ ತುಂಬಾ ಚರ್ಚೆಯಾಯ್ತು. ಇಂದಿಗೂ
ನಿಗೂಢತೆಯನ್ನು ಹೊತ್ತ ಶಾಸನಗಳು,ವೀರಗಲ್ಲುಗಳು,ಮಾಸ್ತಿಕಲ್ಲು, ದತ್ತಿಕಲ್ಲುಗಳು
ದೇವಾಲಯಗಳ ಕುಂಕುಮಾರ್ಚನೆ ತುತ್ತಾಗಿ ಸೊರಗುತ್ತಿವೆ. ಪರಮಭಕ್ತರು ಭಕ್ತಿಪರಾಕಾಶ್ಠೆಯಿಂದ
ಅದರ ಮುಂಡಕ್ಕೆ ತೆಂಗಿನ ಕಾಯಿ ಬೀಸಿ ಬೀಸಿ ಹೊಡೆದು ಗಾಯಮಾಡುತ್ತಿದ್ದಾರೆ.
ಅದರ
ಸ್ಥಿತಿ ಶೋಚನೀಯವಾಗಿದೆ. ಇತ್ತೀಚೆಗೆ ಬೆಳ್ಳಾರೆಯ ಪೆರುವಾಜೆ ಎಂಬಲ್ಲಿ ಶಾತವಾಹನರ ಕಾಲದ
ನಂದಿ ಹಾಗೂ ಅವಲೋಕಿತೇಶ್ವರ/ಅಮಿತಾಬ ರೂಪದ ಬುದ್ದನ ವಿಗ್ರಹ ಪತ್ತೆಯಾಯ್ತು. ಜೊತೆಗೆ
ಕೆಲ ಪ್ರಾಚ್ಯ ವಿಗ್ರಹಗಳನ್ನು ಉತ್ಖತನ ಮಾಡಿದ ಲಕ್ಷ್ಮೀವಾರಣಾಸಿ ಬೆಳ್ಳಾರೆ ಇತಿಹಾಸಕ್ಕೆ
ಬೆಳಕು ನೀಡಿದರು. ಶಿರ್ವದ ಡಾ.ಮುರುಗೇಶಿಯವರಿಂದ ಪರಿಶೀಲನೆಯಾಗಿ ಬುದ್ದನ ಪ್ರತಿಮೆ
ಮಾತ್ರ ಕೊಂಡೊಯ್ದರು. ಕದ್ರಿ ಮಂಜುನಾಥ ದೇವಾಲಯ ಬಿಟ್ಟರೆ ಬೌದ್ಧಧರ್ಮದ ಕುರುಹು ಇಲ್ಲೇ
ಸಿಕ್ಕಿದ್ದು. ದುರ್ದೈವವೆಂದರೆ ದೈವಗಳ ಪ್ರತಿಮೆಗಳೆಂದು ಅವುಗಳನ್ನು ಪೆರ್ವಾಜೆಯ ಜನ
ಉಪ್ಪಿನಂಗಡಿ ಹೊಳೆಗೆ ಬಿಟ್ಟರು. ಇತಿಹಾಸದ ಹೇಳಿದ ಕಲ್ಲುಗಳು ಗಯಾಪದದ ಪಾಲಾಯ್ತು!!!;-(
ಇದು ಅಜ್ಞಾನದ ಪರಮಾವಧಿ. ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ಮಾಸ್ತಿಕಲ್ಲು ಇತ್ತಂತೆ.
ಯಾವ ಹೆಣ್ಮಗಳ ಅನುಗಮನದ ಕತೆಯೋ... ಆ ಕಲ್ಲನ್ನು ಸ್ಥಳೀಯರ್ಯಾರೋ ಎತ್ತಂಗಡಿ ಮಾಡಿದ್ದರೆ.
ಒಂದು ಕಡೆ ಶಾಸನಗಳನ್ನು ಟಾಯ್ಲೆಟ್ ಗುಂಡಿ ಮುಚ್ಚಲು ಬಳಸಿದ್ದನ್ನು ಓದಿದ್ದೇನೆ!!!
ಎಂಥಾ ದುರಂತ ನೋಡಿ. ತಾಳೆಗರಿಗಳು ಕೆಂಪುವಸ್ತ್ರಧಾರಿಗಳಾಗಿ ಮನೆಯ ದೇವರ ಕೋಣೆಯಲ್ಲಿವೆ.
ಮುಟ್ಟಿದರೆ ಅಶುದ್ಧವಾಗಿ ಸರ್ಪ ಬರಬಹುದು!!!
ಇಂತವರೂ ಇದ್ದಾರೆ. ನನ್ನ ಊರಲ್ಲಿ ಉಳ್ಳಾಕುಳು ದೈವಗಳ ಜೀರ್ಣೋದ್ದಾರ ಮಾಡುವಾಗ ಹಳೆಯ
ಪರಿಕರಗಳನ್ನು ಸಂಶೋಧನಾ ಕೇಂದ್ರಗಳಿಗೆ ಕೊಡಿ, ತುಕಾರಾಂ ಪೂಜಾರಿಯವರಿಗೆ ಕೊಡೋಣ ಅಂತ
ಆಡಳಿತ ಪೂಜಾರ್ಮೆ ನೋಡಿಕೊಳ್ಳುವ ಹತ್ತಿರದ ಸಂಬಂಧಿಕರಿಗೆ ಹೇಳಿದ್ದೆ. ಅದೀಗ ನೀರು
ಪಾಲಾಗಿದೆ!!! ದಯವಿಟ್ಟು ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಅಣಿಯಾಗೋಣ.
ಇಲ್ಲದಿದ್ದಲ್ಲಿ ಆಂಗ್ಲಪ್ರೇರಿತ ಇತಿಹಾಸಕಾರರು ತಮಗೆ ಬೇಕಾದಂತೆ ಇತಿಹಾಸವನ್ನ
ತಿರುತ್ತಾರೆ. ಎಚ್ಚರಾ..... <ಸಾಂದರ್ಬಿಕ ಚಿತ್ರ> *charan*
*ಅಣ್ಣಪ್ಪ ಪಂಜುರ್ಲಿಯೇ?* -charan gouda aivaranadu
ತುಳುನಾಡ ಪ್ರಭಾವಿ ದೈವಗಳಲ್ಲಿ ಪಂಜುರ್ಲಿಯೂ ಒಂದು.
ಪಂಜಿಕುರುಳೆ>ಪಂಜುರ್ಲಿ. ಶಿವಾನುಗ್ರಹದಿಂದ ಹುಟ್ಟಿದ ಹಂದಿಮರಿ ಪಂಜುರ್ಲಿ.
ವರ್ತೆಪಂಜುರ್ಲಿ, ತೇಂಬೈಲು ಪಂಜುರ್ಲಿ, ಗೋಳ್ತಾಡಿಪಂಜುರ್ಲಿ. ಕುಪ್ಪೆಟ್ಟುಪಂಜುರ್ಲಿ,
ಬಗ್ಗುಪಂಜುರ್ಲಿ, ಹೀಗೆ ಪಟ್ಟಿ ಬೆಳೆದಂತೆ ಅಣ್ಣಪ್ಪ ಪಂಜುರ್ಲಿ ಎಂಬುದೂ
ಸೇರ್ಪಡೆಯಾಗುತ್ತದೆ. ಹಾಗಾದರೆ ಅಣ್ಣಪ್ಪ ಪಂಜುರ್ಲಿಯೇ??? ಅಣ್ಣಪ್ಪ ಧರ್ಮಸ್ಥಳದ ಪ್ರಮುಖ
ದೈವ ಎಂಬುದು ನಮಗೆಲ್ಲ ವೇದ್ಯವಾದ ಸಂಗತಿ. ಅಲ್ಲಿ ಅಣ್ಣಪ್ಪ ಸ್ವಾಮಿಯಾದರೆ ಉಳಿದೆಡೆ
ಪಂಜುರ್ಲಿಯೇ???? ವಾಸ್ತವವಾಗಿ ಅಣ್ಣಪ್ಪ ಪಂಜುರ್ಲಿಯ ಪ್ರಭೇದವೇ ಅಲ್ಲ. ಉಡುಪಿ
ಅಷ್ಟಮಠದ ಓರ್ವ ಸ್ವಾಮೀಜಿ ಕುಡುಮ ಧರ್ಮಸ್ಥಳಕ್ಕೆ ಬಂದಾಗ ದೇವರಿಲ್ಲದ ಜಾಗದಲ್ಲಿ
ಚಾತುರ್ಮಾಸ ವೃತ ಮಾಡುವುದಿಲ್ಲ ಎಂದು ಖಡ ಖಂಡಿತವಾಗಿ ನುಡಿದಾಗ ಕುಡುಮದ ನೆಲ್ಯಾಡಿ
ಬೀಡಿನ ಬಿರ್ಮಣ್ಣ ಹೆಗ್ಗಡೆ ಚಾಕರಿಮಾಡುವ ಅಣ್ಣಪ್ಪ ಎಂಬ ಕೂಲಿ ಆಳನ್ನು ಕರೆದು ಅಪ್ಪಣೆ
ಮಾಡುತ್ತಾರೆ.
ಕದ್ರಿಯ
ಸಾವಿರ ಲಿಂಗಗಳಲ್ಲೊಂದನ್ನು ಇಲ್ಲಿಗೆ ತಂದು ಬೀಡಿನ ಮರ್ಯಾದೆ ಉಳಿಸು ಎನ್ನುತ್ತಾರೆ.
ಅಣ್ಣಪ್ಪ ಕದಲೀ ಮಂಜುನಾಥನ ಲಿಂಗವನ್ನು ತಂದಾಗ ಅವನ ತೋಳ್ಬಲಕ್ಕೆ ಕದರಿಯ ಪುರೋಹಿತರೇ
ದಂಗಾಗುತ್ತಾರೆ. ಮುಂದೆ ಕುಡುಮದಲ್ಲಿ ಈ ಲಿಂಗ ಪ್ರತಿಷ್ಠಾಪಿಸಿ ರಕ್ಷಣೆಯ
ಜವಬ್ಥಾರಿಯನ್ನು ಅಣ್ಣಪ್ಪನಿಗೆ ವಹಿಸುತ್ತಾರೆ. ಮುಂದೆ ಎತ್ತರದ ಬೆಟ್ಟದ ಮೇಲೆ ಕಾವಲು
ಕಾಯುತ್ತಿದ್ದ ಅಣ್ಣಪ್ಪ ತನ್ನ ಮದುವೆಯನ್ನೇ ಮರೆತು ಬ್ರಹ್ಮಚಾರಿಯಾದ. ಅಣ್ಣಪ್ಪನ ಹಿಂದೆ
ಭವ್ಯವಾದ ಇತಿಹಾಸವಿದೆ.ಬಹುಶಃ ಪಾತ್ರಿಗಳ ಚಮತ್ಕಾರ ಪವಾಡಗಳು ಅಣ್ಣಪ್ಪನನ್ನು
ಪಂಜುರ್ಲಿಯಾಗಿಸಿರಬಹುದು. ಧರ್ಮಸ್ಥಳದ ಆಡಳಿತಗಾರರಿಂದ ಈ ದೈವದ ಪ್ರಸಾರವಾಯಿತು.
ಎಲ್ಲೆಲ್ಲಿ ಧರ್ಮಸ್ಥಳದ ಜಾಗ ಇದೆಯೋ ಅಲ್ಲೆಲ್ಲ ಅಣ್ಣಪ್ಪನ ಆರಾಧನೆ ಇದೆ. ಸುಳ್ಯದ
ಕಾಂಚೋಡು ಮಂಜುನಾಥ(?)ದೇಗುಲ ಇದಕ್ಕೊಂದು ನಿದರ್ಶಣ. ಆದರೂ ಅಣ್ಣಪ್ಪ ಹಾಗೂ ಪಂಜುರ್ಲಿಯ
ಸಂಬಂಧದ ಕುರಿತು ಮಾನ್ಯ ಬಾಬು ಪರವರಲ್ಲಿ ಕೇಳಿದಾಗ ಅವರ ಮನೆಯಲ್ಲಿ ಆರಾಧನೆ ಇದ್ದರೂ
ಸ್ಪಷ್ಟ ಮಾಹಿತಿ ಸಿಗಲಿಲ್ಲ. ನಿಮ್ಮ ಅಭಿಪ್ರಾಯ ಏನೆಂದು ತಿಳಿಯ ಬಯಸುತ್ತೇನೆ. Plz tl
me...Thank to Madhusudan Shetty for providing a beautiful picture.
Subscribe to:
Posts (Atom)






