ತುಳುನಾಡು ಪರಶುಭಾರ್ಗವನ
ಸೃಷ್ಟಿ. ಇದು ಎರಡು ಸಾವಿರ ವರುಷಗಳ ಹಿಂದೆ ಜರುಗಿದ ಐತಿಹಾಸಿಕ ಸಂಗತಿ. ಜಮದಗ್ನಿ
ರೇಣುಕೆಯರ ಮಗ ಈ ಪರಶುರಾಮ. ಅವನ ಕೊಡಲಿಯ ಏಟಿಕೆ ಸಮುದ್ರ ಹಿಂದೆ ಸರಿದು ತುಳುನಾಡು
ನಿರ್ಮಾಣವಾಯಿತೇ? ಹೌದು. ಇಲ್ಲಿದೆ ಕೆಲ ಆಧಾರ! ಅಷ್ಟಕ್ಕೂ ಯಾರು ಈ ಪುರಾಣ ಪುರುಷ?
ಪರಶುರಾಮನ ಪ್ರಸ್ಥಾಪ ಪುರಾಣಗಳಲ್ಲಿ ಕಾಣಿಸಿಕೊಂಡದ್ದು ಕದಂಬರ ಕಾಲದಲ್ಲಿ. ಕದಂಬರಿಗಿಂತ
ಹಿಂದೆ ಕರಾವಳಿ ಕೊಂಕಣ ಭಾಗ ಭಾರ್ಗವ ರಾಜವಂಶದ ಆಡಳಿತದಲ್ಲಿತ್ತು. ಈ ವಂಶಸ್ಥನೇ ಈ
ಪರಶುರಾಮನಿರ ಬಹುದು! ಕೊಡಲಿ ಮಾನವ ನಾಗರಿಕ ವಿಕಾಸದ ಆದಿ ಆಯುಧ. ಇದೇ ಆಯುಧದಿಂದ ಈ
ಭಾರ್ಗವ ವಂಶಸ್ಥ ಕಾಡು ಕಡಿದು ತುಳುವರ ನಾಡು ಮಾಡಿದ. ಆ ಕಾರಣಕ್ಕೆ ಈತ ಮಹಾತ್ಮ! ನಮ್ಮ
ಹಿರಿಯರ ಹೃದಯ ವೈಶಾಲ್ಯತೆ ಇದು! ಗೋವಾದಿಂದ ಕೇರಳದ ವರೆಗೆ ಮಹಾಪುರುಷ ಪರಶುರಾಮನ
ಸೃಷ್ಟಿ! ಸಾಮಾನ್ಯ ಶಕೆಯ ಆರಂಭದ ಸುಮಾರು ಎರಡು ನೂರು ವರುಷಗಳ ಹಿಂದೆ ಅರಭೀ ಸಮುದ್ರ
ಇಂದಿನ ಪಶ್ಚಿಮ ಕರಾವಳಿಯ ಭೂಭಾಗವನ್ನು ಆವರಿಸಿಕೊಂಡಿತ್ತು.


Very Nice Information Charan. Saaraswata Brahmanaru uthara bharatadinda krishi bhoomi huduki dakshina bhagakke baruvaga parashuramanu samudara rajanalli manavi maadi avarige bhoomi karunisidanu.(melina chitra bahusha adanne heluttide) Avana taayi konkana deviya (Renuka devi/yellamma devi/konkana devi) nenapigoskara daana maadida bhoomige konkana pradesha emba hesarittanu endu naanu ondu article vodida nenapu. Wikipedia dalloo idara bagge mahiti ide.
ReplyDeleteನಾಗರಾಜ್ ಭಟ್ ರವರು ಬರೆದದ್ದು ಸರಿಯಾಗಿಯೇ ಇದೆ. ಸಾರಸ್ವತ ಬ್ರಾಹ್ಮಣರು ಸರಸ್ವತಿ ನದಿ ತೀರದಿಂದ ದಕ್ಷಿಣಕ್ಕೆ ತಮ್ಮ ಗೋವುಗಳ ಒಟ್ಟಿಗೆ ಕೃಷಿಗಾಗಿ ಭೂಮಿ ಹುಡುಕುತ್ತಾ ಬಂದು ಗೋವ, ರತ್ನಗಿರಿ, ರಾಜಾಪುರ, ಕಾರವಾರ, ಉಡುಪಿ, ಕದಲಿ (ಈಗಿನ ಕದ್ರಿ), ಕೂಡಲ್ ( ಈಗಿನ ಕುಡ್ಲ - ಮಂಗಳೂರು), ಮೊಂತಿಮಾರು.... ಮೊದಲಾದ ಕಡೆ ನೆಲೆಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಹಿಂದಿನ ಕತೆಯೇ ಈ ಪರಶುರಾಮನ ಸೃಷ್ಟಿ. ಕಶ್ಯಪ, ಅತ್ರಿ, ಭಾರಧ್ವಜ, ವಿಶ್ವಾಮಿತ್ರ, ವಸಿಷ್ಠ, ಜಮದಗ್ನಿ ... ಹೀಗೆ ಸಾಗುತ್ತೆ ಸಾರಸ್ವತರ ಗೊತ್ರಗಳು. ನಮ್ಮ ತುಳುನಾಡಿನ ಎಲ್ಲಾ ಚರಿತ್ರೆ ಕೆಲವು ಸ್ವ ಹಿತಾ ಶಕ್ತಿಗಳು ತಮಗೆ ಬೇಕಾದಹಾಗೆ ಬದಲಾಯಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಮಲ್ಪೆಯಲ್ಲಿ ವಡಬಂಡೆಶ್ವರ ಎಂಬ ಹೆಸರಿದೆ. ಆದರೆ ಇಲ್ಲಿ ಈಗ ಇರುವುದು ಬಲರಾಮನ ದೇವಸ್ಥಾನ! ಹಾಗಾದರೆ ವಡಬಂಡೆಶ್ವರ ಎಲ್ಲಿದೆ? ಅದು ಈಗಿನ ಸೈಂಟ್ ಮೇರಿಸ್ ದ್ವೀಪ! ನಾನು ಈ ಮಾಹಿತಿ ಯಾವುದೇ ಪುಸ್ತಕ ಓದಿ ಬರೆಯುತ್ತಿಲ್ಲ ಬದಲಾಗಿ ಗೋವ ಸಂಸ್ಥಾನದ ಆಸ್ಥಾನ ಶಿಲ್ಪಿ ದಿ.ಅನಂತಯ್ಯ ಆಚಾರ್ಯರ ಮೂಲಕ ತಿಳಿದು ಕೊಂಡದ್ದು.
ReplyDelete